ಕಾಲರ್ಡ್   

ಪಾಶ್ಚಾತ್ಯ ದೇಶಗಳ ಸೊಪ್ಪು ತರಕಾರಿ; ಹಸಿಯಾಗಿ ಇಲ್ಲವೆ ಬೇಯಿಸಿ ತಿನ್ನುತ್ತಾರೆ. ಕ್ರೂಸಿಫೆರಿ ಕುಟುಂಬಕ್ಕೆ ಸೇರಿದೆ. ವೈಜ್ಯಾನಿಕ ನಾಮ ಬ್ರಾಸಿಕ ಓಲರೇಶಿಯ ವೆರೈಟಿ ಏಸಿಫ್ಯಾಲ. ಭಾರತದಲ್ಲಿ ಇದರ ಉಪಯೋಗ ಬಹಳ ಕಡಿಮೆ. ಇದು ಸುಮಾರು 2'-4' ಎತ್ತರಕ್ಕೆ ಬೆಳೆಯಿವ ಬಹುವಾರ್ಷಿಕ ಮೂಲಿಕೆ ಸಸ್ಯ. ಕಾಂಡ ಪಕ್ಕರೆಂಬೆಗಳಿಲ್ಲದೆ ನೇರವಾಗಿ ಬೆಳೆಯುತ್ತದೆ. ತುದಿಯಲ್ಲಿ ಎಲೆಗಳು ಗುಲಾಬಿಯ ದಳಗಳಂತೆ ಜೋಡಣೆಗೊಂಡಿವೆ. ಎಲೆಗಳು ದಪ್ಪ ಹಾಗೂ ರಸಭರಿತ ; ನಯವಾಗಿಯೂ ಇವೆ. ತೊಟ್ಟು ಚಿಕ್ಕದು. ಕೆಲವು ಸಸ್ಯದ ಎಲೆಗಳು ಕಡುಗೆಂಪು.

(ಎನ್.ಆರ್.ಆರ್.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ